ಸಮುದ್ರಫಲ == ವೈಜ್ಞಾನಿಕ ಹೆಸರು == ಬ್ಯಾರಿಂಗ್‍ಟನ್ ರೆಸಿಮೊಸ == ಇತರೆ ಹೆಸರು == ತಮಿಳು : ಸಮುದ್ರಪುಲ್ಲಾನಿ ತೆಲುಗು : ಕನಪ ಚೆಟ್ಟು ಸಂಸ್ಕøತ : ಸಮುದ್ರಫಲ ಹಿಂದಿ : ನಿವರ್ ಹುಟ್ಟು : ಚೋಳಮಂಡಲ ತೀರ ಪುಪ್ಪ : ವೈಶಾಖ == ವಿವರಣೆ == ಮರವು ಸಣ್ಣಗಾತ್ರವಾಗಿದ್ದು 10ಮೀಟರ್ ಎತ್ತರ ಬೆಳೆಯುತ್ತದೆ. 10-30ಸೆ.ಮೀ. ಎಲೆಗಳು ಕೊಂಬೆಗಳ ಕೊನೆಯಲ್ಲಿಇರುತ್ತವೆ. 2-3 ಸೆ.ಮಿ. ಉದ್ದದ ತಿಳಿಗೆಂಪು ಬಣ್ಣದ ಹೂವುಗಳು 20-60 ಸೆಂ.ಮೀ.ಉದ್ದದಜೋಲಾಡುತ್ತಿರುವ ಪುಪ್ಪಮಂಜರಿಯಲ್ಲಿಇರುತ್ತವೆ. 3-4 ಸೆ.ಮೀ ಉದ್ದ ನೇರಳೆ ಅಥವಾ ಹಸಿರು ಬಣ್ಣದ ಕಾಯಿಗಳು 4 ಮೂಲೆಗಳನ್ನು ಹೊಂದಿರುತ್ತವೆ. == ಉಪಯೋಗಗಳು == ಬೇರುತಂಪುಗುಣವನ್ನು ಹೊಂದಿದ್ದು, ಮಲಬದ್ದತೆಯನ್ನುಗುಣ ಮಾಡುತ್ತದೆ. ಬೀಜವನ್ನು ಪುಡಿಮಾಡಿ ಮೂಲವ್ಯಾಧಿಗೂ, ಪಿತ್ತದೋಷಕ್ಕೂಆಗುವುದು. ಕಾಯಿಯನ್ನು ಪುಡಿಮಾಡಿ ಬೇರೆ ಔಷಧಗಳ ಸಮೇತ ಸ್ವರಭಂಗಕ್ಕೂ ನಂಜಿಗೂಉಪಯೋಗಿಸಬಹುದು. ಸಂಧಿವಾತದ ನೋವುಗಳಿಗೆ ತೊಗಟೆಯಕಷಾಯವನ್ನು ಲೇಪಿಸುವುದರಿಂದ ಮತ್ತು ಸೇವಿಸುವುದರಿಂದ ನೋವು ಶಮನವಾಗುವುದು. ಚರ್ಮದತುರಿಕೆ, ಹುಳುಕಡ್ಡಿ. ಸಿಡುಬು ಮುಂತಾದಚರ್ಮದ ಸಮಸ್ಯೆಗಳಿಗೆ ಎಲೆ ಅಥವಾ ಬೇರುಅಥವಾತೊಗಟೆಯನ್ನುಅರೆದುಗಂಧವನ್ನು ಲೇಪಿಸುವುದರಿಂದಗುಣಮುಖರಾಗುತ್ತಾರೆ. ಮೂಗಿನಲ್ಲಿಕಟ್ಟಿರುವ ಶೀತದ ನೀರು ಇಳಿಯುವ ಹಾಗೆ ಕಾಯಿಯನ್ನು ಒಣಗಿಸಿ ಪುಡಿಮಾಡಿ ನಸ್ಯ ಹಾಕುವರು. == ಉಲ್ಲೇಖಗಳು ==